ಕೊಪ್ಪಳ ಫೆ.
ಐತಿಹಾಸಿಕ ಕನಕಗಿರಿ ಉತ್ಸವ ಪ್ರಾರಂಭಕ್ಕೆ ಇದೀಗ ಕ್ಷಣಗಣನೆ ಪ್ರಾರಂಭವಾಗಿದ್ದು, ಫೆ. ೦೨ ಮತ್ತು ೦೩ ರಂದು ಎರಡು ದಿನಗಳ ವೈಭವೋಪೇತ ಉತ್ಸವಕ್ಕೆ ಇಡೀ ಕನಕಗಿರಿ ನವ ವಧುವಿನಿಂತೆ ಶೃಂಗಾರಗೊಂಡಿದೆ.
ಈಗಾಗಲೆ ಮುಖ್ಯ ವೇದಿಕೆ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, ವೇದಿಕೆಗೆ 'ಕನಕರಾಯ ವೇದಿಕೆ' ಎಂಬುದಾಗಿ ಘೋಷಣೆ ಮಾಡಲಾಗಿದೆ. ಉತ್ಸವದ ಪ್ರಮುಖ ವೇದಿಕೆ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಬಿಂಬಿಸುವಂತೆ ಸಿದ್ಧಪಡಿಸಲಾಗಿದೆ. ಕನಕಗಿರಿ ಉತ್ಸವಕ್ಕೆ ಇಡೀ ಕನಕಗಿರಿ ಗ್ರಾಮ ಸಿದ್ಧಗೊಂಡಿದ್ದು, ಕನಕಗಿರಿಯ ಪ್ರಮುಖ ರಸ್ತೆಗಳು ಡಾಂಬರೀಕರಣಗೊಂಡು ಸಜ್ಜಾಗಿವೆ. ಕನಕಗಿರಿಯ ರಸ್ತೆಗಳ ಇಕ್ಕೆಲಗಳು ಸ್ವಚ್ಛಗೊಂಡಿದ್ದು, ಸಾರ್ವಜನಿಕರು ಉತ್ಸವದ ರಸದೌತಣ ಸವಿಯಲು ತುದಿಗಾಲ ಮೇಲೆ ನಿಂತಿದ್ದಾರೆ. ಮಾಧ್ಯಮದವರು ಉತ್ಸವದ ಕ್ಷಣ ಕ್ಷಣದ ಸುದ್ದಿಗಳನ್ನು ರವಾನಿಸಲು ಅನುಕೂಲವಾಗುವಂತೆ ವೇದಿಕೆಯ ಪಕ್ಕದಲ್ಲೇ ಸುಸಜ್ಜಿತ ಮಾಧ್ಯಮ ಕೇಂದ್ರ ಸಿದ್ಧವಾಗಿದೆ.
ವಿಜಯನಗರ ಸಾಮ್ರಾಜ್ಯದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕನಕಗಿರಿಯ ನಾಯಕರ ಗತವೈಭವವನ್ನು ಮರುಕಳಿಸುವಂತೆ ಮಾಡುವುದು, ಇತಿಹಾಸವನ್ನು ಇಂದಿನ ಪೀಳಿಗೆಗೆ ಪರಿಚಯ ಮಾಡಿಸುವ ಉದ್ದೇಶದಿಂದ ಉತ್ಸವವನ್ನು ಆಚರಿಸಲಾಗುತ್ತಿದೆ. ೨೦೧೦ ರಲ್ಲಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗಿದ್ದು, ನಂತರ ರಾಜ್ಯದಲ್ಲಿ ಆವರಿಸಿದ ಬರದ ಕಾರಣಕ್ಕಾಗಿ ಉತ್ಸವವನ್ನು ರದ್ದುಪಡಿಸಲಾಗಿತ್ತು. ಆದರೆ ಇದೀಗ ಸರ್ಕಾರ ಈ ಬಾರಿ ಕನಕಗಿರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಅನುದಾನವನ್ನೂ ಸಹ ಬಿಡುಗಡೆ ಮಾಡಿದೆ. ಉತ್ಸವದ ಯಶಸ್ವಿಗೆ ಸ್ಥಳೀಯರು, ಸಾರ್ವಜನಿಕರು ಎಲ್ಲ ಜನಪ್ರತಿನಿಧಿಗಳು ಸಹಕರಿಸಬೇಕು ಎನ್ನುತ್ತಾರೆ ಕನಕಗಿರಿ ಶಾಸಕ ಶಿವರಾಜ ತಂಗಡಗಿಯವರು.
2013 stage super i like thise stage
ಪ್ರತ್ಯುತ್ತರಅಳಿಸಿ