WEL COME TO KANAKAGIRI UTSAV 2013

ಶನಿವಾರ, ಫೆಬ್ರವರಿ 20, 2010

ಕನಕಗಿರಿಯ ಇತಿಹಾಸ

ಭಾರತದ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಸ್ಮರಣೀಯವಾದದು. ದಕ್ಷಿಣದಿಂದ ದಂಡೆತ್ತಿ ಬರುತ್ತಿದ್ದ ಮುಸ್ಲಿಮರ ದಾಳಿಂದ ತತ್ತರಿಸಿದ್ದ ಹಿಂದೂ ಧರ್ಮದ ಪುನರುತ್ಥಾನಕ್ಕೆ ನಾಂದಿ ಹಾಡಿತಲ್ಲದೆ ಎರಡು ಶತಮಾನಗಳಿಗೂ ಹೆಚ್ಚು ಕಾಲ ಸಾಮ್ರಾಜ್ಯವಾಳಿ `ಸುವರ್ಣಯುಗ'ವೆಂದು ಕರೆಸಿಕೊಂಡ ಕೀರ್ತಿ ವಿಜಯನಗರಕ್ಕೆ ಸಲ್ಲುತ್ತದೆ.ಇಂಥ ಮಹತ್ವದ ಯುಗದಲ್ಲಿ ಬೆಳಕಿಗೆ ಬಂದ ಶಿಲ್ಪ ಸಂಪತ್ತಿನ ಕಲಾ ಕಣಜ ಕನಕಗಿರಿ.
`ನಡೆದು ನೋಡಲು ಹೋಗು ಹಂಪಿ ಸಿರಿ
ಮನತಣಿದು ನೋಡಲು ಬಾ ಕನಕಗಿರಿ'
ಎಂಬ ಕವಿಯ ಸಾಲುಗಳು ಅಕ್ಷರಶ: ಸತ್ಯ ಎಂದು ಕನಕಗಿರಿಯನ್ನು ನೋಡಿದ ಹೃದಯವಂತ ಪ್ರವಾಸಿಗರಿಗೆ ಅನಿಸದೆ ಇರದು. ಕನಕಗಿರಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿಗೆ ಸೇರಿದ ಒಂದು ಐತಿಹಾಸಿಕ ಪ್ರವಾಸಿ ತಾಣ. ಜಿಲ್ಲಾ ಕೇಂದ್ರ ಸ್ಥಾನದಿಂದ ೪೮ ಕಿ.ಮಿ, ತಾಲೂಕು ಕೇಂದ್ರ ಸ್ಥಾನದಿಂದ ೨೨ ಕಿ.ಮಿ ಹಾಗೂ ಜಗತ್ಪ್ರಸಿದ್ದ ಹಂಪೆಂದ ೨೦ ಮೈಲಿಗಳ ದೂರದಲ್ಲಿ ಶಿಲ್ಪ ಸಂದೌರ್ಯದ ಈ ರಮ್ಯ ತಾಣವಿದೆ.
ಕನಕಗಿರಿ ಹೆಸರಿನ ಹಿಂದಿನ ಮರ್ಮ:
ದಂತಕಥೆಗಳಲ್ಲಿ ಹೆಸರಿಸಲಾದ ವಾರಾಣವಾತಿ ಎಂಬ ಹೆಸರಿನ ಈ ಪ್ರದೇಶದವು ಪುಷ್ಪ ಮತ್ತು ಜಯಂತಿ ಎಂಬ ನದಿಗಳೆರಡರ ಸಂಗಮದ ತಾಣವಾಗಿತ್ತು ಮತ್ತು ಈ ಪ್ರದೇಶವು ದಟ್ಟವಾದ ಕಾಡಿನಿಂದ ಆವೃತ್ತಗೊಂಡಿತ್ತು. ಇಲ್ಲಿ ಜಯಂತ ನರಸಿಂಹ ಎಂಬ ದೇವರು ನೆಲೆಸಿದ್ದನು. ಈ ನದಿ ತಟದಲ್ಲಿ ಇಪ್ಪತ್ತ ನಾಲ್ಕು ಜನ ಬೌದ್ಧ ಮುನಿಗಳಲ್ಲಿ ಒಬ್ಬರಾಗಿದ್ದರೆನ್ನಲಾದ `ಕನಕಮುನಿ'ಇಲ್ಲಿ ತಪಸ್ಸು ಗೈದು ಕೆಲ ಕ್ಷಣ ಕನಕವೃಷ್ಟಿ ಅಂದರೆ ಚಿನ್ನದ ಮಳೆ ತರಿಸಿದ ಈ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಕನಕಗಿರಿ ಎಂದು ಕರೆಯಲಾತು ಎಂದು ಹೇಳಲಾಗುತ್ತಿದೆ.
ಸ್ಕಂದ ಪುರಾಣದ ತುಂಗ ಮಹಾತ್ಮೆಯಲ್ಲಿ ಈ ಸ್ಥಳದ ಮಹಿಮೆಯನ್ನು ಹಾಗೂ ದೇವರ ಚರಿತೆಯನ್ನು ವರ್ಣಿಸಲಾಗಿದೆ ಅಲ್ಲದೆ ಈ ಪುರಾಣದಲ್ಲಿ ಕನಕಗಿರಿಯನ್ನು `ಸುವರ್ಣಗಿರಿ' ಎಂದು ಕರೆಯಲಾಗಿದೆ. ಹಂಪೆಂದ ೨೦ ಮೈಲುಗಳ ದೂರದಲ್ಲಿ `ಸುವರ್ಣಗಿರಿ' ಅಂದರೆ ಕನಕಗಿರಿ ಇರುವುದಾಗಿ ಹೇಳಿದ್ದು ಅಲ್ಲಿ ಹೇಳಲಾಗಿರುವ ಭೌಗೋಳಿಕ ಅಂಶಗಳೆಲ್ಲ ಸತ್ಯವಾಗಿವೆ. ಕನಕಗಿರಿ ಹಾಗೂ ಇಲ್ಲಿರುವ ಇತಿಹಾಸಿದ ಕುರಿತು ಹಲವಾರು ಇತಿಹಾಸ ತಜ್ಷರು ರೋಚಕದ ಅಂಶಗಳನ್ನು ಹೊರಗೆಡಿಹಿದ್ದಾರೆ. ಶಾಸನಗಳಿಂದ ಸಂಗ್ರಹಿಸಲ್ಪಟ್ಟ ಹಲವು ವಿಷಯಗಳು ಕನಕಗಿಯ ಇತಿಹಾಸವನ್ನು ಹೇಳುತ್ತಿವೆ.
ಕ್ರಿಸ್ತಯುಗದ ಪ್ರಾರಂಭದಲ್ಲಿ ಟಾಲೆವಿಯನೆಂಬ ವಿದೇಶಿಯನು ತನ್ನ ಪ್ರವಾಸಕಥನದಲ್ಲಿ `ಕಲಿಗೇರಿಯಸ್' (ಕನಕಗಿರಿ) ಮತ್ತು `ಮೊದಗಾಲ್' (ಮುದಗಲ್) ವ್ಯಾಪಾರದ ಕೇಂದ್ರಗಳಾಗಿದ್ದವು ಎಂದು ಹೇಳಿದ್ದಾನೆ.
ಶ್ರೀಕನಕಾಚಲ ಲಕ್ಷ್ಮೀ ನರಸಿಂಹ ದೇವಾಲಯ:
ಚಿನ್ನದ ಮಳೆಯ ನಂತರದ ವರ್ಷಗಳಲ್ಲಿ ಕಾಲಕ್ರಮೇಣ ಪಕ್ರೃತಿಯ ವಿಕೋಪಕ್ಕೆ ದಟ್ಟವಾದ ಕಾಡಿನ ನದಿ ತಟದಲ್ಲಿದ್ದ ಜಯಂತ ನರಸಿಂಹ ಲಿಂಗಾಕಾರದ ಸಾಲಿಗ್ರಾಮವು ಮಣ್ಣೊಳಗೆ ಹೂತು ಹೋಗಿದ್ದಾಗಿ ಹೇಳಲಾಗುತ್ತಿದೆ. ಅಲ್ಲದೆ ತದ ನಂತರದಲ್ಲಿ ಗುಜ್ಜಲವಂಶದ ಪರಸಪ್ಪ ಈ ಪ್ರದೇಶಕ್ಕೆ ಬಂದು ಇಲ್ಲೆ ನೆಲೆಸಿದ್ದನು. ಒಮ್ಮೆ ಹಾಲು ಕೊಡುವ ಹಸುವೊಂದು ಹುತ್ತಕ್ಕೆ ಹಾಲುಗರೆಯುವುದನ್ನು ಕಂಡರು.ಇದರಿಂದ ಆಶ್ಚರ್ಯನಾದ ಪರಸಪ್ಪ ಉಡಚಿನಾಯಕ ಹುತ್ತವನ್ನು ಕೀಳಿಸಿದನು. ಹುತ್ತ ಕೀಳುವ ಹಾಳು ಮೂರ್ಛೆ ಹೋದರು.ಇದರಿಂದ ಚಿಂತಿತನಾಗಿದ್ದ ಪರಸಪ್ಪನಿಗೆ ಕನಸಿನಲ್ಲಿ ಬಂದ ವೆಂಕಟರಮಣ ಸತ್ಯಾಂಶವನ್ನು ತಿಳಿಸಿ ಇಲ್ಲಿ ದೇವಾಲಯ ನಿರ್ಮಾಣ ಮಾಡಲು ಸೂಚಿದನು. ವಿಜಯನಗರ ಅರಸ ಪ್ರೌಢ ದೇವರಾಯನಿಗೆ ವೆಂಕಟರಮಣನ ದರ್ಶನದ ಕುರಿತು ತಿಳಿಸಿ ಅವರ ಸಹಾಯದಿಂದ ದೇವಾಲಯ ನಿರ್ಮಾಣಕ್ಕೆ ಮುಂದಾಗಿದ್ದು,ಮತ್ತು ಈ ದೇವರನ್ನು ಕನಕರಾಯ ಎನ್ನುವ ಹೆಸರಿನಿಂದ ಕರೆಯಲಾರಂಭಿಸಿದ್ದು ಇತಿಹಾಸದಿಂದ ತಿಳಿದು ಬರುತ್ತದೆ. ಸರ್ವ ಜಾತಿ, ಧರ್ಮವನ್ನು ತೊಡೆದು ಸರ್ವರಿಗೂ ದರ್ಶನಕ್ಕೆ ಮುಕ್ತವಾಗಿರುವ ಕನಕಗಿರಿಯನ್ನು ಎರಡನೆ ತಿರುಪತಿ ಎಂದು ಕರೆಯಲಾಗುತ್ತಿದೆ. ಜಾತ್ರೋತ್ಸವ ಮುನ್ನ ೯ ದಿನಗಳ ಕಾಲ ತಿರುಪತಿಯಲ್ಲಿ ನಡೆಯುವಂತೆ ನಿತ್ಯ ಬೆಳಗ್ಗೆ ಹಾಗೂ ಸಂಜೆ ಉತ್ಸವಗಳನ್ನು ರಾಜಬೀದಿಯಲ್ಲಿ ಮೆರವಣಿಗೆಯೊಂದಿಗೆ ನಡೆಸಲಾಗುತ್ತದೆ.
ವೆಂಕಟಾಪತಿ ಭಾವಿ:
ವೆಂಕಟಾಪತಿ ಭಾವಯಿಂದ ಮಾರುದೂರದಲ್ಲಿರುವ ಪುಷ್ಕರಣಿಯು ತಿರುಪತಿಯಲ್ಲಿರುವ ಪುಷ್ಕರಣಿಯನ್ನು ನೆನಪಿಗೆ ತರುತ್ತದೆ. ಪೂರ್ವದಂತೆ ಪಶ್ಚಿಮ ದಿಕ್ಕಿನಲ್ಲೂ ಮತ್ತೊಂದು ಪುಷ್ಕರಣಿ ಇದ್ದು ಇವು ಉಡಚಿನಾಯಕನ ಮಗನಾದ ಕನಕಯ್ಯ ಉಡಚಿನಾಯಕ ಕಟ್ಟಿಸಿದನೆಂದು ಹೇಳಲಾಗುತ್ತಿದೆ. ಕನಕಗಿರಿಯಲ್ಲಿ ೭೦೧ ದೇವಾಲಯಗಳು, ೭೦೧ ಭಾವಿಗಳು ಇದ್ದವೆಂದು ಇರುವ ಎಲ್ಲ ದೇವಾಲಯಗಳಿಗೂ ವೈಭವದ ಪೂಜೆ ನಡೆದು ಬಂದಿದ್ದು, ಈಗ ಕೆಲವು ಮಾತ್ರ ಕಾಣಸಿಗುತ್ತವೆ.ರಥ ಸಾಗುವ ತೇರು ಬೀದಿಯಲ್ಲಿ ಎದರು ಹನುಮಪ್ಪ, ಎಲ್ಲಮ್ಮ, ಬಸವಣ್ಣ, ಗಜಲಕ್ಷ್ಮಿ, ವಿರಭದ್ರೇಶ್ವರ, ನೀಲಕಂಠ, ವಿರೂಪಾಕ್ಷೇಶ್ವರ, ಮಹಿಸಾಸುರ ಮರ್ದಿನಿ, ಶಂಕರಲಿಂಗ ಸೇರಿದಂತೆ ಇತರ ದೇವಾಲಯಗಳು ಇವೆ.
ವಿಜಯನಗರ ಇತಿಹಾಸದೊಂದಿಗೆ ಶಿಲ್ಪಕಲಾ ಸಿರಿ ಸಂಪತ್ತು ಪಡೆದ ಕನಕಗಿರಿ ದಾಳಿಗೆ ತುತ್ತಾದರೂ ಇನ್ನೂ ಅಷ್ಟು ಉಳಿದೆ. ಉಳಿದ ಸಾಮ್ರಾಜ್ಯದ ಕುರುಹುಗಳನ್ನು ನಾವೆಲ್ಲ ರಕ್ಷಿಸಬೇಕಾಗಿದೆ ಮತ್ತು ಇದನ್ನು ಮುಂದಿನ ಜನಾಂಗಕ್ಕೆ ತೋರಿಸಲು ಉಳಿಸಬೇಕಾಗಿದೆ.
-ವಿವಿದ ಮೂಲಗಳಿಂದ
ಶ್ರೀಕನಕಾಚಲಪತಿ ದೇವಾಲಯ ಇಲ್ಲಿರುವ ದೇವಾಲಯಗಳಲ್ಲಿ ಅತ್ಯಂತ ಪ್ರಮುಖ ಮತ್ತು ರಮಣೀಯ, ಅಪೂರ್ವ ಶಿಲ್ಪ ಸಂಪತ್ತಿನ ದೇವಾಲಯ.ವಿಜಯ ನಗರ ಅರಸರಲ್ಲೆ ಶ್ರೇಷ್ಠನಾದ ಶ್ರೀಕೃಷ್ಣದೇವರಾಯನ ಕಾಲವಾದ ೧೫ನೇ ಶತಮಾನದ ಪೂವಾರ್ದದಲ್ಲಿ ನಿರ್ಮಾಣಗೊಂಡಿದ್ದು, ಕಲಾ ಸಿರಿಗೆ ಸಾಕ್ಷಿಯಾಗಿದೆ. ೨೦೮ ಅಡಿ ಉದ್ದ ಹಾಗೂ ೯೦ಅಡಿ ಅಗಲವಿರುವ ದೇವಾಲಯ ವಿಶಾಲವಾಗಿದೆ. ಒಳ ಪ್ರಾಕಾರದಲ್ಲಿ ಬ್ರಹ್ಮ, ಕೃಷ್ಣ, ಹನುಮಂತ, ಶಿವ, ಗರುಡ, ಸರಸ್ವತಿ ಮಂದಿರಗಳು, ಪಾಕಶಾಲೆ, ಯಜ್ಞಶಾಲೆ, ಕಲ್ಯಾಣ ಮಂಟಪಗಳು ಇವೆ. ಈ ದೇವಸ್ಥಾನಕ್ಕೆ ಭವ್ಯವಾದ ಮಹಾದ್ವಾರ ಮತ್ತು ಆಕರ್ಷಣೀಯ ಗೋಪುರಗಳು ಮತ್ತು ಅದರ ರಚನಾ ಕಲೆಯು ದೀರದಿಂದಲೆ ಪ್ರವಾಸಿಗರ ಮನಸೂರೆಗೊಳ್ಳುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ